Kannada Test Series - 2022

For CSE Mains 2022

Course Description

ಐಚ್ಛಿಕ ವಿಷಯ ಕನ್ನಡ ಸಾಹಿತ್ಯ ಪರೀಕ್ಷಾ ಸರಣಿ ಕಾರ್ಯಕ್ರಮ-೨೦೨೨

ಉದ್ದೇಶಿತ ಸಮೂಹ: ನಾಗರಿಕ ಸೇವಾ ಮುಖ್ಯ ಪರೀಕ್ಷೆ ೨೦೨2 ಬರೆಯಲಿರುವ ವಿದ್ಯಾರ್ಥಿಗಳು ಹಾಗೂ ಮೂರೇ ತಿಂಗಳಲ್ಲಿ ಕನ್ನಡ ಸಾಹಿತ್ಯವನ್ನು ಪುನರಾವರ್ತನೆ ಮಾಡಲಿಚ್ಛಿಸುವ ವಿದ್ಯಾರ್ಥಿಗಳು.

ಪ್ರತಿ ವರ್ಷವೂ ಐಚ್ಛಿಕ ವಿಷಯ-ಕನ್ನಡ ಸಾಹಿತ್ಯವು ಹತ್ತಾರು ಕನ್ನಡಿಗರಿಗೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಫಲಗೊಳ್ಳಲು ಸಹಕಾರಿಯಗುತ್ತಿದೆ. ಆಳವಾದ ಅಧ್ಯಯನ ಹಾಗೂ ಸಮರ್ಪಕ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಈ ವಿಷಯದಲ್ಲಿ ಒಳ್ಳೆಯ ಅಂಕಗಳನ್ನು ಗಳಿಸುತ್ತಿದ್ದಾರೆ. ಇದೇ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಮ್ಯಾನಿಫೆಸ್ಟ್ ಲರ್ನಿಂಗ್ ಅಕಾಡೆಮಿ, ಕನ್ನಡ ಸಾಹಿತ್ಯ ಪರೀಕ್ಷಾ ಸರಣಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಈ ವಿಷಯದ ಪಠ್ಯಕ್ರಮವನ್ನು ಕಡಿಮೆ ಸಮಯದಲ್ಲಿ ಅಭ್ಯಸಿಸುವುದು ಎಷ್ಟು ಮುಖ್ಯವೋ, ಉತ್ತರ ಬರೆಯುವ ಅಭ್ಯಾಸವನ್ನು ಮಾಡುವುದೂ ಅಷ್ಟೇ ನಿರ್ಣಾಯಕ. ಈ ಎರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಾಮಾನ್ಯ ಅಧ್ಯಯನದ ಜೊತೆಗೆ ದಕ್ಷವಾಗಿ ಕನ್ನಡ ಸಾಹಿತ್ಯದ ಅಧ್ಯಯನ ಹಾಗೂ ಉತ್ತರ ಬರೆಯುವ ಅಭ್ಯಾಸವನ್ನು ಮಾಡಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಉತ್ತರ ಬರೆಯುವುದು ಒಂದು ಕಲೆ, ಹಾಗೂ ಒಂದು ವಿಜ್ಞಾನವೂ ಕೂಡ. ವಿದ್ಯಾರ್ಥಿಗಳು ಈ ಎರಡೂ ಅಂಶಗಳನ್ನು ಮೈಗೂಡಿಸಲು ಈ ಕಾರ್ಯಕ್ರಮ ಬಹು ಉಪಯೋಗಕಾರಿಯಾಗಲಿದೆ.

Features

ಕಾರ್ಯಕ್ರಮದ ರೂಪುರೇಷೆಗಳು ಈ ಕೆಳಗಿನಂತಿವೆ:

  • ಜೂನ್ ೧೫ ರಿಂದ ಐಚ್ಛಿಕ ವಿಷಯ ಪರೀಕ್ಷೆಯ ದಿನದವರೆಗಿನ ಕಾರ್ಯಕ್ರಮ
  • ಪಠ್ಯಕ್ರಮದ ನಾಲ್ಕು ವಿಭಾಗಗಳ ನಾಲ್ಕು ಸುತ್ತಿನ ಪುನರಾವರ್ತನೆ
  • ಮೊದಲ ಸುತ್ತಿನಲ್ಲಿ ಎಲ್ಲ ವಿಭಾಗಗಳ ಮೇಲೆ ೧೨೫ ಅಂಕಗಳ ಅಣಕು ಪರೀಕ್ಷೆಗಳು
  • ಎರಡನೇ ಸುತ್ತಿನಲ್ಲಿ ಎಲ್ಲ ವಿಭಾಗಗಳ ಮೇಲೆ ೨೫೦ ಅಂಕಗಳ ಅಣಕು ಪರೀಕ್ಷೆಗಳು
  • ಮೂರನೇ ಸುತ್ತಿನಲ್ಲಿ ಎರಡೂ ಪ್ರಶ್ನೆಪತ್ರಿಕೆಗಳ ಮೇಲೆ ೨೫೦ ಅಂಕಗಳ ಅಣಕು ಪರೀಕ್ಷೆಗಳು
  • ನಾಲ್ಕನೇ ಸುತ್ತಿನಲ್ಲಿ ಒಂದೇ ದಿನದಲ್ಲಿ ಎರಡೂ ಪ್ರಶ್ನೆಪತ್ರಿಕೆಗಳ ಮೇಲೆ ೨೫೦ ಅಂಕಗಳ ಅಣಕು ಪರೀಕ್ಷೆಗಳು
  • ಸಂಚಾಲಕರಿಂದಲೇ ಪ್ರತಿ ಅಣಕು ಪರೀಕ್ಷೆಯ ಮೌಲ್ಯಮಾಪನ
  • ಪ್ರತಿ ಅಣಕು ಪರೀಕ್ಷೆಯ ಚರ್ಚೆ ಹಾಗೂ ಮೌಲ್ಯವರ್ಧನಾ ತರಗತಿಗಳು
  • ಮೌಲ್ಯಮಾಪನ ಹಾಗೂ ಚರ್ಚೆಯ ನಂತರ ಮುಖಾಮುಖಿ ಚರ್ಚೆಗೆ ಅವಕಾಶ

 

ಶುಲ್ಕ: ೮೦೦೦ ರೂಪಾಯಿಗಳು

ಸಂಚಾಲಕರು: ಮೃತ್ಯುಂಜಯ ಶಿ. ನಾವಲಗಟ್ಟಿ

Rs.8000/-

Rs.8000/-